ತಲೈಚ್ಛೇರಿ -
 	ದಕ್ಷಿಣ ಭಾರತದ ಕೇರಳ ರಾಜ್ಯದ ಕಣ್ಣನ್ನೂರು ಜಿಲ್ಲೆಯ ಕರಾವಳಿಯಲ್ಲಿರುವ ಒಂದು ಸಾಧಾರಣ ರೇವುಪಟ್ಟಣ.  ಜನಸಂಖ್ಯೆ 68,759 (1971).  ಇದು ಕೋಳಿಕ್ಕೋಡ್ ಪಟ್ಟಣದಿಂದ ಈಶಾನ್ಯಕ್ಕೆ 72 ಕಿಮೀ. ದೂರದಲ್ಲಿದೆ.  ಇಲ್ಲಿ ಅನೇಕ ಚರ್ಚುಗಳೂ ಕಾಲೇಜುಗಳೂ ಕಟ್ಟಡಗಳೂ ಇವೆ.  ಈ  ರೇವುಪಟ್ಟಣದಿಂದ ಏಲಕ್ಕಿ, ಮೆಣಸು, ತೆಂಗು, ಕಾಫಿ, ಶ್ರೀಗಂಧದ ಮರ ಮೊದಲಾದವು ವಿದೇಶಗಳಿಗೆ ರಫ್ತಾಗುತ್ತವೆ.  ಹಿಂದೆ ಬ್ರಿಟಿಷರು ಭಾರತಕ್ಕೆ ಬಂದಾಗ ಪಶ್ಚಿಮ ತೀರದ ಈ ಸ್ಥಳದಲ್ಲಿ ನೆಲೆಸಿದ್ದರು.  ಇಲ್ಲಿ 1683ರಲ್ಲಿ ಈಸ್ಟ್ ಇಂಡಿಯ ಕಂಪೆನಿಯವರು ಒಂದು ವ್ಯಾಪಾರ ಕೋಠಿಯನ್ನು ಸ್ಥಾಪಿಸಿದ್ದರು. 			(ಎಸ್.ಎನ್.ಎಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ